ಹಾಯ್ ಬೆಂಗಳೂರ್ ಕನ್ನಡದ ಕಪ್ಪು ಸುಂದರಿ ಎಂದೇ ಪ್ರಚಲಿತದಲ್ಲಿರುವ ಕನ್ನಡ ವಾರಪತ್ರಿಕೆ.ಕನ್ನಡದ ಪ್ರತಿಭಾವಂತ ಲೇಖಕ ಹಾಗೂ ಪ್ರಭಾವಿ ಪತ್ರಕರ್ತರಾದ ರವಿ ಬೆಳಗೆರೆ ಯವರ ಸಾರಥ್ಯದಲ್ಲಿ ಮುನ್ನೆಡೆಯುತ್ತಿದೆ. === ಸ್ಥಾಪನೆ === ೧೯೯೫ರಲ್ಲಿ ಬೆಂಗಳೂರಿನ ಪದ್ಮನಾಭ ನಗರದಲ್ಲಿನ ಕಛೆರಿಯಲ್ಲಿ ರವಿ ಬೆಳಗೆರೆಯವರ ಸಾರಥ್ಯದಲ್ಲಿ ಹಾಗೂ ಆರ್.ಟಿ.ವಿಠಲಮೂರ್ತಿ, ರಾ.ಸೊಮನಾಥ,ಜೋಗಿ ಮತ್ತು ಇ.ಹೆಚ್.ಸಂಗಮದೇವರವರುಗಳ ಸಮಕ್ಷಮದಲ್ಲಿ ಪ್ರಕಟಗೊಂಡಿತು. === ಸಾರ ಸಂಗ್ರಹ === ಲವ್ ಲವಿಕೆ. ಬಾಟಮ್ ಐಟಂ. ಖಾಸ್ ಬಾತ್. ಪತ್ರಿಕಾ ಲೋಕದಲ್ಲೇ ಸಂಚಲನ ಮೂಡಿಸಿ ಐದು ವರ್ಷಗಳವರೆಗು ಹೆಚ್ಚು ಪ್ರಕಟವಾಗಿದ್ದು ಪಾಪಿಗಳ ಲೋಕದಲ್ಲಿ ,ಇದರ ಪ್ರಮುಖ ವಿಷಯ ಪಾತಕ ಲೋಕದ ಸುದ್ದಿಯಾಗಿತ್ತು. === ಇತರೆ ಸಾರ ಸಂಗ್ರಹಗಳು === ಹಗರಣಗಳು. ವ್ಯವಹಾರಗಳು. ರಾಜಕೀಯ ಹಿನ್ನೆಲೆಗಳು. ಕೊಲೆ. ಅಪರಾಧ. ಹೀಗೆ ಮುಂತಾದುವುಗಳನ್ನು ಸಮಾಜದ ಕಣ್ಣಿಗೆ ಅತಿ ಸೂಕ್ಷ್ಮವಾಗಿ ಪರಿಚಯಿಸಿದ ಹಿಗ್ಗಳಿಕೆ ಈ ಪತ್ರಿಕೆಯಾಗಿದೆ ಈ ಎಲ್ಲಾ ಸಾರಸಂಗ್ರಹ ಲೇಖನಗಳನ್ನು ಹೊರೆತು ಪಡೆಸಿ ಮನೋವಿಜ್ಣಾನ ಕ್ಷೇತ್ರ, ಕ್ರೀಡೆ, ವಿಜ್ಣಾನ ಮತ್ತು ಸಿನೆಮಾ ಕ್ಷೇತ್ರಗಳನ್ನು ಒಳಗೊಂಡ ವಾರ ಪತ್ರಿಕೆಯಾಗಿದೆ. ಮಾರುಕಟ್ಟೆಯ ಜಾಹಿರಾತುಗಳಿಲ್ಲದೇ ಪ್ರಕಾಶಿತವಾಗುತ್ತಿರುವ ಕನ್ನಡ ಪತ್ರಿಕೆಗಳಲ್ಲೊಂದು.